ಋತುಮಾನದ ಪತ್ರಿಕಾ ಪ್ರಕಟಣೆ

ನಿನ್ನೆ ಹಲವು ನ್ಯೂಸ್ ಚಾನೆಲ್ ನ ಪ್ಯಾನೆಲ್ ಡಿಸ್ಕಷನ್ ಗಳಲ್ಲಿ ಶ್ರೀಯುತ ಅಡ್ಡಂಡ ಕಾರ್ಯಪ್ಪನವರು ಋತುಮಾನ ದಾಖಲೀಕರಣ ಮಾಡಿದ ಟಿಪ್ಪುವಿನ ಲಾವಣಿಯನ್ನು ಉಲ್ಲೇಖಿಸಿ ಒಂದು ಸಾಲು “ಪರಂಪಾರಗತ ವಿರೋಧಿ ಗೌಡರು ಟಿಪ್ಪುವ ತುರಿದರು ಖಡ್ಗದಲಿ” ಎಂದಿದೆ ಎಂದು ಯಾರೋ ಬರೆದುಕೊಟ್ಟ ಹಸಿ ಹಸಿ ಸುಳ್ಳು ಹಾಗೆ ಓದಿದ್ದಾರೆ . ಯಾರೋ ಬರೆದುಕೊಟ್ಟದ್ದು ಎಂದು ಹೇಳಿದ್ದು ಏಕೆಂದರೆ ಅವರು ಲಾವಣಿ ಕೇಳಿದ್ದರೆ ಅದರಲ್ಲಿನ ಉಲ್ಲೇಖ ಸ್ಪಷ್ಟವಾಗಿ ಅವರಿಗೆ ಏನಿದೆ ಎಂದು ಗೊತ್ತಾಗುತಿತ್ತು . ನಿಜವಾದ ಸಾಲು ಹೀಗಿದೆ “ಪರಂಪರೆಯ ಪರ ವಿರೋಧಿ ಫೌಜನು ಕುರೀಗಳಂದದಿ ಖಡ್ಗದಲಿ”

 

 ಕಾರ್ಯಪ್ಪನವರ ಮಾತಿಗೆ ಮತ್ತು ಲಾವಣಿಯ ಭಾಗಕ್ಕೆ ನೇರವಾಗಿ ಲಿಂಕ್ ಕೆಳಗಡೆ ಕೊಟ್ಟಿದ್ದೇವೆ .

ಟಿಪ್ಪು ಮಡಿದ ಗಳಿಗೆಯ ಉಲ್ಲೇಖವಿರುವ ಇಲ್ಲಿರುವ ಲಾವಣಿಯ ಆವೃತ್ತಿ ಇನ್ನೆರಡು ಕಡೆಯೂ ಇದೆ . ಒಂದು ಬಿ. ನೀಲಕಂಠಯ್ಯನವರು ಸಂಗ್ರಹಿಸಿರುವ “ಸ್ವಾತಂತ್ರ ಸಂಗ್ರಾಮದ ಲಾವಣಿಗಳು ” ಕೃತಿಯಲ್ಲಿ, ಇದರ ಪುಟಗಳನ್ನೂ ಇಲ್ಲಿ ಹಾಕಿದ್ದೇವೆ . ಹಾಗೂ ಎಲ್ ಗುಂಡಪ್ಪನವರು ಸಂಗ್ರಹಿಸಿದ ಟಿಪ್ಪು  ಸುಲ್ತಾನನ ಬೀಳಿನ ಹಾಡಿನಲ್ಲೂ ಇದೇ ಉಲ್ಲೇಖವಿದೆ .

 ಕಣ್ಣ ಮುಂದೆ ಇರುವ ಸಾಕ್ಷಿಯನ್ನು ಮರುಪರಿಶೀಲನೆ ಮಾಡದೆ TV9ಕನ್ನಡ  ಮತ್ತು  News18ಕನ್ನಡ ಚಾನೆಲ್ ಗಳು  ಹಾಗೇ ಪ್ರಸಾರ ಮಾಡಿವೆ. ಎರಡೂ ಚಾನೆಲ್ ಗಳು ಇಂದಿನ ಡಿಬೇಟ್ ನಲ್ಲಿ ಜನರಿಗೆ ಸತ್ಯ ತಿಳಿಸಬೇಕು.

Addanda Talk
https://youtu.be/rtQ5laCiExE?t=292

Tippu Lavani
https://youtu.be/1WZVCRD6Z6w?t=372

 ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು.

ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app

** iphone ** : https://apps.apple.com/in/app/ruthumana/id1493346225

 

ಪ್ರತಿಕ್ರಿಯಿಸಿ