ರಾಮು ಕವಿತೆಗಳು – ಪುಸ್ತಕ ಬಿಡುಗಡೆ

ಋತುಮಾನದ ಅಂಗಳದಲ್ಲಿ ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ‘ರಾಮು ಕವಿತೆಗಳು’ ಬಿಡುಗಡೆಯಾಗುತ್ತಿದೆ. ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಔಪಚಾರಿಕತೆಯಿಲ್ಲ. ಕನ್ನಡದ ಇಬ್ಬರು ಹಿರಿಯ ವಿಮರ್ಶಕರಾದ ಓ. ಎಲ್. ನಾಗಭೂಷಣಸ್ವಾಮಿ ಮತ್ತು ಎಚ್. ಎಸ್. ರಾಘವೇಂದ್ರ ರಾವ್ ಇಲ್ಲಿಯ ಕವನಗಳ ಕುರಿತು ಆಪ್ತವಾಗಿ ಮಾತನಾಡುವ ಮೂಲಕ ಈ ಕವನ ಸಂಕಲನವನ್ನ ಕಾವ್ಯಾಸಕ್ತರಿಗೆಲ್ಲ ಪರಿಚಯಿಸುತ್ತಿದ್ದಾರೆ. ಅವರ ಮಾತುಗಳನ್ನು ಆಲಿಸುವ ಮೂಲಕ ಇಂದಿನ ಪುಸ್ತಕ ಬಿಡುಗಡೆಗೆ ನಾವೆಲ್ಲ ಸಾಕ್ಷಿಗಳಾಗೋಣ ಬನ್ನಿ!

ನಾಳೆಯಿಂದ ಕರ್ನಾಟಕದ ಹಲವಾರು ಕಡೆ ಪುಸ್ತಕಗಳು ದೊರೆಯಲಿವೆ. ಅವುಗಳ ಮಾಹಿತಿಯನ್ನು ಋತುಮಾನ ಫೇಸ್ ಬುಕ್ ಪುಟದಲ್ಲಿ ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುವುದು.

ಪುಸ್ತಕವನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಬಯಸುವವರು store.ruthumana.com ಗೆ ಭೇಟಿ ಕೊಡಿ.
ಇನ್ನಿತರ ಮಾಹಿತಿಗೆ [email protected] ಅಥವಾ [email protected] ಗೆ ಈ ಮೇಲ್ ಮಾಡಬಹುದು.

ಪುಸ್ತಕ ಕೊಳ್ಳಲು ನೇರ ಕೊಂಡಿ :  http://store.ruthumana.com/product/ramu_kavitegalu/

ರಾಮು ಕವಿತೆಗಳಿಗೆ ಸಂಬಧಪಟ್ಟ ಎಲ್ಲಾ ವಿಡಿಯೋಗಳನ್ನು ಈ ಕೊಂಡಿಯಲ್ಲಿ ನೋಡಬಹುದು : https://goo.gl/NgTkD7

ಪ್ರತಿಕ್ರಿಯಿಸಿ