ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ , ಕಣ್ಣೊಡಲ ತುಂಬುವ ಸಶಕ್ತ ರೂಪಕಗಳೊಡನೆ ದೇವನೂರು ಮಹಾದೇವ ಬರೆದ ಕೃತಿ ‘ಕುಸುಮಬಾಲೆ’ ಕನ್ನಡ ಕಾದಂಬರಿ ಇತಿಹಾಸದಲ್ಲಿ a sudden leap ಅನ್ನಿಸಿಕೊಂಡು ಹಲವು ಚರ್ಚೆಗೆ ದಾರಿಯಾಯಿತು. ತನ್ನ ವಿಶಿಷ್ಟವಾದ ಕಥನ ಕ್ರಮದಿಂದ ಓದುಗ ಮತ್ತು ವಿಮರ್ಶಕ ವರ್ಗಗಳೆರಡರಿಂದಲೂ ಪ್ರಶಂಶೆಗೆ ಪಾತ್ರವಾಯಿತು .
ಕುಸುಮಬಾಲೆ ಮೊತ್ತ ಮೊದಲನೆಯದಾಗಿ ೧೯೮೫ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು . ಅದು ಪುಸ್ತಕರೂಪದಲ್ಲಿ ಹೊರಬಂದದ್ದು ೧೯೮೮ ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ದಾರೆ. ಮುಂದೆ ಇದು ಹಲವು ಕಂತುಗಳಲ್ಲಿ ಪ್ರಕಟವಾಗಲಿದೆ . ಮೊದಲ ಕಂತು ಇಲ್ಲಿದೆ ಕೇಳಿ.
ಪ್ರೊ. ಎ. ಎಂ. ಶಿವಸ್ವಾಮಿ ಅವರ ಓದುವಿಕೆ ಒಂದು ಅದ್ಭುತ ಪರ್ಫಾರ್ಮೆನ್ಸ್. ಧನ್ಯವಾದಗಳು ಅವರನ್ನು ಪರಿಚಯಿಸಿದ್ದಕ್ಕೆ.
‘ಕುಸುಮಬಾಲೆ’ ಯ ಮರು ಓದೂ ಈ ಮೂಲಕ ಸಾಧ್ಯವಾಗುತ್ತಿದೆ.
ಧನ್ಯವಾದಗಳು
ವಿಶಿಷ್ಟ ಪ್ರಯೋಗ, ಮುಂದುವರಿಯಲಿ…..
ನಿಮ್ಮೊಟಿಗೆ ನಾವು….
Pingback: ಕುಸುಮಬಾಲೆ – ಓದು : ಎ. ಎಂ. ಶಿವಸ್ವಾಮಿ – ಕಂತು ೨ – ಋತುಮಾನ
ಶಿವಸ್ವಾಮಿ ಅವರ ಓದುವ ಶಕ್ತಿ ಮತ್ತು ಕಾದಂಬರಿ ಕಥನ ಶಕ್ತಿಗಳೆರಡನ್ನು ಸಂಯೋಜಿಸಿ, ಕೇಳು ಓದುಗರ ಮನಗೆದ್ದ ಋತುಮಾನ ಬಳಗಕ್ಕೆ ಅಭಿನಂದನೆಗಳು ಮತ್ತು ಕೃತಜ್ಞತೆ ಗಳು.
ಮಹಾಂತೇಶ ಪಾಟೀಲ್
Pingback: ಕುಸುಮಬಾಲೆ – ಓದು : ಎ. ಎಂ. ಶಿವಸ್ವಾಮಿ – ಕಂತು ೩ – ಋತುಮಾನ
Pingback: ಕುಸುಮಬಾಲೆ – ಓದು : ಎ. ಎಂ. ಶಿವಸ್ವಾಮಿ – ಕಂತು ೪ – ಋತುಮಾನ
Pingback: ಕುಸುಮಬಾಲೆ – ಓದು : ಎ. ಎಂ. ಶಿವಸ್ವಾಮಿ – ಕಂತು ೫ – ಋತುಮಾನ
Pingback: ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೬ – ಋತುಮಾನ
Pingback: ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೭ – ಋತುಮಾನ
Pingback: ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೮ – ಋತುಮಾನ
Pingback: ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೯ – ಋತುಮಾನ