In this enlightening and insightful conversation Aakash Singh Rathore, the distinguished author of ‘Becoming Babasaheb: The Life and Times of Bhimrao Ramji Ambedkar (Volume 1)’, takes us into the intricate journey of shaping the biography of the iconic figure, Dr. B. R. Ambedkar.
Currently available Ambedkar’s biographies rely on one of two sources. The first, relied upon by Marathi speakers, is C.B. Khairmode’s 12-volume Dr Bhimrao Ramji Ambedkar Charitra. The second, relied upon by non-Marathi speakers – and the most cited book of Ambedkar Studies – is Dhananjay Keer’s Dr Babasaheb Ambedkar: Life & Mission. These ‘authoritative’ biographies are riddled with misinformation. This engaging discussion uncovers the meticulous process behind Rathore’s groundbreaking biography, which seeks to rectify historical inaccuracies in previous biographies and provide a comprehensive understanding of Dr. Ambedkar’s early life and ideas.
Accompanying Aakash Singh Rathore are:
Vijayashanthi Murthy, Assistant Professor in the Department of English at St. Joseph’s College of Commerce, Bengaluru.
Disha KR, Research Scholar at IIT Bombay.
Narasimhamurthy VL, Assistant Professor in the Department of English at National College, Bengaluru.
Together, these scholars delve into the significance of archival research, the challenges of uncovering obscured truths, and the profound impact of Dr. Ambedkar’s visionary thought on modern society.
ನಮ್ಮ ಅರಿವನ್ನು ವಿಸ್ತರಿಸುವ ಒಳನೋಟಗಳುಳ್ಳ ಈ ಮಾತುಕತೆಯಲ್ಲಿ, ‘Becoming Babasaheb: The Life and Times of Bhimrao Ramji Ambedkar (Volume 1)’ ಎಂಬ ವಿಶಿಷ್ಟ ಪುಸ್ತಕ ದ ಲೇಖಕರಾದ ಆಕಾಶ್ ಸಿಂಗ್ ರಾಥೋಡ್, ಈ ದೇಶ ಕಂಡ ಅಪ್ರತಿಮ ವ್ಯಕ್ತಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ರೂಪಿಸಿದ ಸಂಕೀರ್ಣ ವಿಚಾರ ಗಳ ಕಡೆ ನಮ್ಮ ಗಮನ ಸೆಳೆಯುತ್ತಾರೆ.
ಪ್ರಸ್ತುತ ಲಭ್ಯವಿರುವ ಅಂಬೇಡ್ಕರ್ ಅವರ ಜೀವನ ಚರಿತ್ರೆಗಳು ಇರುವ ಎರಡು ಮೂಲಗಳಲ್ಲಿ ಒಂದನ್ನು ಅವಲಂಬಿಸಿವೆ. ಮೊದಲನೆಯದು, ಮರಾಠಿ ಭಾಷಿಕರಾದ ಸಿ. ಬಿ. ಖೈರ್ಮೋಡೆ ಅವರ 12-ಸಂಪುಟಗಳ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಚರಿತ್ರೆ . ಎರಡನೆಯದು, ಮರಾಠಿಯಲ್ಲದ ಭಾಷಿಗರಿಂದ ಬಂದದ್ದು – ಮತ್ತು ಅಂಬೇಡ್ಕರ್ ಅಧ್ಯಯನಗಳ ಕುರಿತು ಹೆಚ್ಚು ಉಲ್ಲೇಖಿತ ಪುಸ್ತಕ – ಧನಂಜಯ್ ಕೀರ್ ಅವರ ಡಾ ಬಾಬಾಸಾಹೇಬ್ ಅಂಬೇಡ್ಕರ್: ಲೈಫ್ & ಮಿಷನ್. ಈ ‘ಅಧಿಕೃತ’ ಜೀವನಚರಿತ್ರೆಗಳು ಹಲವು ತಪ್ಪು ಮಾಹಿತಿಯಿಂದ ಕೂಡಿವೆ.
ಈ ಚರ್ಚೆಯು ರಾಥೋಡ್ ಅವರು ಅಂಬೇಡ್ಕರ್ ಅವರ ಕುರಿತು ಬರೆದ ಜೀವನ ಚರಿತ್ರೆಯ ಹಿಂದಿನ ನಿಖರವಾದ ಪ್ರಕ್ರಿಯೆಯನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತದೆ. ಇದು ಈ ಹಿಂದಿನ ಜೀವನಚರಿತ್ರೆಗಳಲ್ಲಿನ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವುದರ ಜೊತೆಗೆ ಡಾ. ಅಂಬೇಡ್ಕರ್ ಅವರ ಆರಂಭಿಕ ಜೀವನ ಮತ್ತು ಆಲೋಚನೆಗಳ ಬಗ್ಗೆ ಸಮಗ್ರವಾದ ತಿಳುವಳಿಕೆಯನ್ನು ನೀಡುತ್ತದೆ.
ಈ ಮಾತುಕತೆ ಯಲ್ಲಿ ಆಕಾಶ್ ಸಿಂಗ್ ರಾಥೋಡ್ ಜೊತೆಗಿರುವವರು:
ವಿಜಯಶಾಂತಿ ಮೂರ್ತಿ, ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ.
ಡಾ.ದಿಶಾ ಕೆಆರ್, ಐಐಟಿ ಬಾಂಬೆಯಲ್ಲಿ ಸಂಶೋಧನಾ ವಿದ್ಯಾರ್ಥಿ.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನರಸಿಂಹಮೂರ್ತಿ ವಿ.ಎಲ್.
ಈ ವಿದ್ವಾಂಸರು ಒಟ್ಟಾಗಿ ಆರ್ಕೈವಲ್ ಸಂಶೋಧನೆಯ ಮಹತ್ವ, ಸಂದಿಗ್ದ ಅಥವಾ ಅಸ್ಪಷ್ಟವಾದ ಸತ್ಯಗಳನ್ನು ಬಹಿರಂಗಪಡಿಸುವಲ್ಲಿನ ಸವಾಲುಗಳು ಮತ್ತು ಆಧುನಿಕ ಸಮಾಜದ ಮೇಲೆ ಡಾ. ಅಂಬೇಡ್ಕರ್ ಅವರ ದಾರ್ಶನಿಕ ಚಿಂತನೆಯ ಆಳವಾದ ಪ್ರಭಾವದ ಕುರಿತು ಚರ್ಚಿಸಿದ್ದಾರೆ.
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X
Download RUTHUMANA App here :
** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225